ಕುಂದಾಪುರ ಸಮುದಾಯದ ನಾಟಕ-ಸುಲ್ತಾನ್ ಟಿಪ್ಪು


ವಾಸುದೇವ ಗಂಗೇರ ನಿರ್ದೇಶನದ ಸುಲ್ತಾನ್ ಟಿಪ್ಪು

ಐತಿಹಾಸಿಕ ವ್ಯಕ್ತಿಯೊಬ್ಬನನ್ನು ಆ ಕಾಲದ ಸಾಮಾಜಿಕ,ಸಾಂಸ್ಕೃತಿಕ ಮತ್ತು ರಾಜಕೀಯ ಸನ್ನಿವೇಶಗಳಿಂದ ಹೊರತೆಗೆದು ಈ ಕಾಲದ ಕಣ್ಣುಗಳಿಂದ ಅಳೆಯುವಾಗ ಆಗಬಹುದಾದ ತಪ್ಚಾಪುಗಳ ಅರಿವಿಟ್ಟುಕೊಂಡೇ ಎಚ್.ಎಸ್.ಶಿವಪ್ರಕಾಶ್ ರಚಿಸಿದ ನಾಟಕ`ಸುಲ್ತಾನ್ ಟಿಪ್ಪು. ಈ ನಾಟಕವನ್ನು ಯುವ ನಿರ್ದೇಶಕ ವಾಸುದೇವ ಗಂಗೇರ ಕುಂದಾಪುರ ಸಮುದಾಯದ ಕಲಾವಿದರಿಗಾಗಿ ನಿರ್ದೇಶಿಸಿದ್ದಾರೆ.ಫೆಬ್ರವರಿ ಹದಿನೆಂಟರಂದು ಮಂಗಳೂರಿನಲ್ಲಿ ಪ್ರದರ್ಶಿತವಾದ ಈ ನಾಟಕ ಟಿಪ್ಪುವನ್ನು ಈ ಕಾಲದ ಕಣ್ಣುಗಳಿಂದ ನೋಡುವಂತೆ ಮಾಡುತ್ತದೆ.ಟಿಪ್ಪುವಿಗೆ ಮೈಸೂರಿನ ಮೇಲಿನ ಪ್ರೀತಿಗಿಂತ ಬ್ರಿಟೀಷರ ಮೇಲಿನ ದ್ವೇಷನೇ ದೊಡ್ಡದಾಗಿತ್ತು.ಇದೊಂದೇ ಕಾರಣಕ್ಕಾಗಿ ಟಿಪ್ಪು ಭಾರತದ ಮೊದಲ ರಾಷ್ಟ್ರೀಯವಾದಿ ನಾಯಕ ಎಂದೆನಿಸಿಕೊಳ್ಳುವುದಲ್ಲ;ಎಲ್ಲ ಜಾತಿ,ಜನಾಂಗ,ಧಾರ್ಮಿಕತೆ,ಸಂಸ್ಕೃತಿಗಳನ್ನೊಳಗೊಂಡ ರಾಷ್ಟ್ರೀಯತೆಯೊಂದು ರೂಪುಗೊಳ್ಳುವುದರ ಹಿಂದೆ ಟಿಪ್ಪುವಿನ ವ್ಯಕ್ತಿತ್ವ ಕೆಲಸ ಮಾಡಿದೆ.ಆದುದರಿಂದಲೇ ಟಿಪ್ಪು ಇತಿಹಾಸದ ಪಠ್ಯಗಳಿಗಿಂತ ಹೆಚ್ಚಾಗಿ ಜನಪದರ ಲಾವಣಿಗಳಲ್ಲಿ ಇಂದಿಗೂ ಉಸಿರಾಡುತ್ತಿದ್ದಾರೆ.ಶ್ರೀರಂಗ ದೇವಾಲಯದ ಘಂಟಾನಾದ ಮತ್ತು ಮಸೀದಿಯಪ್ರಾರ್ಥನೆ ಎರಡೂ ಒಟ್ಟಿಗೆ ತನ್ನ ಕಿವಿಗಳಿಗೆ ಕೇಳಬೇಕೆಂಬ ಸಮಚಿತ್ತ ಮನೋಭಾವ ಟಿಪ್ಪುವಿನದು.

ಟಿಪ್ಪುವಿನ ಕೊನೆಯ ದಿನ ಆತನ ವ್ಯಕ್ತಿತ್ವದ ಹೇಳಿಕೆಯಂತಿದೆ.

`ಈವತ್ತು ಒಂದು ದಿನವಾದರೂ ನಿಮ್ಮ ಜಿದ್ದನ್ನು ಬಿಡಿ'ಎಂಬ ರಝಾಖಾನನ ಮಾತನ್ನು ಧಿಕ್ಕರಿಸಿ ಯುದ್ಧ ಪೋಷಾಕನ್ನು ಧರಿಸಿದ ಟಿಪ್ಪು`ನನ್ನ ಗೋರಿಯ ಮೇಲೆ ಗುಲಾಬಿ ಪಕಳೆಗಳನ್ನು ಚೆಲ್ಲಬೇಡ,ಗುಲಾಬಿ ಗಿಡವನ್ನು ನೆಡು'ಎನ್ನುತ್ತಾನೆ.ಯುದ್ಧ ಭೂಮಿಯಲ್ಲಿ ಬ್ರಿಟೀಷ್ ಸೈನಿಕನ ಗುಂಡೇಟಿಗೆ ಬಲಿಯಾಗುತ್ತಾನೆ.ಆತನ ಮಾತಲ್ಲೇ ಹೇಳುವುದಾದರೆ,`ಕೆಲಸಕ್ಕೆ ಬಾರದ ಗಳಿಗೆಗಳನ್ನು ನಾನೇಕೆ ಮುಂದುವರಿಸಲಿ?ನಿಷಚ್ಪ್ರಯೋಜಕವಾಗಿ ಬದುಕಿಗೆ ಅಂಟಿಕೊಂಡರೆ ಬೇರೆಯವರ ದೃಷ್ಟಿಯಲ್ಲಿ ಹೋಗಲಿ,ಕೊನೆಗೆ ನನ್ನ ದೃಷ್ಟಿಯಲ್ಲೂ ನಗೆಪಾಟಲಿನ ವಸ್ತುವಾಗುತ್ತೇನೆ.ಹುಲಿಗೆ ನರಿಯಂತೆ ಬದುಕಲು ಸಾಧ್ಯವೇ?'


ಸಮುದಾಯ ಕುಂದಾಪುರ ಪ್ರಸತುತಪಡಿಸಿದ ಈ ನಾಟಕ ಟಿಪ್ಪುವನ್ನು ಒಬ್ಬಜನನಾಯಕನನ್ನಾಗಿ,ಧೀರೋಧಾತ್ತ ಸೇನಾನಿಯನ್ನಾಗಿ,ಎಲ್ಲಕ್ಕಿಂತ ಹೆಚ್ಚಾಗಿ,ರಾಗ-ದ್ವೇಷಗಳ.ಗುಣ-ದೋಷಗಳ ಮನುಷ್ಯನನ್ನಾಗಿ ನೋಡಲು ಪ್ರೇರೇಪಿಸುತ್ತದೆ.

-ಉದಯ ಗಾಂವಕಾರಚಿತ್ರ-ಉದಯ ಗಾಂವಕಾರ ಪಾತ್ರ ಪರಿಚಯ

ಸುಲ್ತಾನ್ ಟಿಪ್ಪು-ವಿಕ್ರಮ್ ಕೆ.ಎಸ್

ಮೀರ್ ಸಾದಿಕ್-ಯಶವಂತ್

ಪೂರ್ಣಯ್ಯ-ಅನಂತ ಪ್ರಭು

ಸಯ್ಯದ್ ಗಫಾರ್-ರವಿ.ವಿ.ಎಮ್

ರಝಾ ಖಾನ್-ಸುಧಾಕರ ಕಾಂಚನ

ರುಬಿಯಾ ಭಾನು-ಬಿಂದು ತುಂಗಾ

ಫಕ್ರುನ್ನಿಸಾ-ಸಂಧ್ಯಾ ಭಟ್

ಲಕ್ಷ್ಮಿ ಅಮ್ಮಣ್ಣಿ-ಚೈತ್ರಾ ಎಮ್

ಬಾಲ ಟಿಪ್ಪು,ಖಾದಿರ್-ನಿಶಾಂತ್

ಹೈದರಾಲಿ-ಗೌತಮ್

ರೀಪಾ-ನಿತೇಶ

ಹ್ಯಾರಿಸ್-ಕೌಶಿಕ್

ವೆಲ್ಲಸ್ಲಿ-ನಾಗಪ್ರಸಾದ

ಮೊಹದ್ದೇನ್-ಅಝಾದ್ ಬೈಂದೂರು

ಶಾಹಿರ್ದಗಳು- ವಿನಾಯಕ, ಕೌಶಿಕ, ನಿತೇಶ, ಗುರುಪ್ರಸಾದ, ನಾಗೇಂದ್ರ

ಸಂಗೀತ ನಿರ್ವಹಣೆ-ಪ್ರತೀಕ್ ಪೈ

ರಂಗಸಜ್ಜಿಕೆ-ಕೆ.ಎಂ.ಬಾಲಕೃಷ್ಣ,ಗೋಪಾಲಕೃಷ್ಣ

ಬೆಳಕು-ಸದಾನಂದ ಬೈಂದೂರು

ರಂಗ ನಿರ್ವಹಣೆ-ಶಂಕರ ಆನಗಳ್ಳಿ,ಉತ್ಕಲಾ.ಕೆ

ನಿರ್ದೇಶನ-ವಾಸುದೇವ ಗಂಗೇರ