ರಂಗ ರಂಗು-ಮಕ್ಕಳ ರಜಾ ಮೇಳ

ರಂಗ ರಂಗು--ಅದೇ ಗುಂಗು?!          


     ಬೇಸಿಗೆ ಶಿಬಿರಗಳು ತರಗತಿ ಕೋಣೆಯ ವಿಸ್ತರಿಸಿದ ಭಾಗವಾಗಿ,ಮಕ್ಕಳಿಗೆ ಸಜೆಯಾಗಿ,ದಂದೆಕೋರರ ಸ್ವರ್ಗವಾಗಿ ಪರಿಣಮಿಸುತ್ತಿರುವ ಕಾಲಘಟ್ಟದಲ್ಲೇ ಕುಂದಾಪುರ ಸಮುದಾಯ `ರಂಗ ರಂಗು' ಮಕ್ಕಳ ರಜಾಮೇಳವನ್ನು ಆಯೋಜಿಸುತ್ತಿದೆ.ಮೇಳಕ್ಕೆ ಪ್ರವೇಶ ಉಚಿತ. ಮಕ್ಕಳಿಗೆ ರಜಾ ಶಿಬಿರದ ಅಗತ್ಯವಿಲ್ಲ,ಅಗತ್ಯವಿರುವುದು ಪ್ರೀತಿ,ಅವಕಾಶ ಮತ್ತು ಬೆಂಬಲ ಎಂಬ ನಮ್ಮ ನಿಲುವಿನಲ್ಲಿ ಈಗಲೂ ಬದಲಾವಣೆಯಿಲ್ಲ.ಆದರೂ , ಮನೆಯಲ್ಲಿ ಸಿಗಬೇಕಾದ ಪ್ರೀತಿ...ಅಜ್ಜಿಮನೆಯಲ್ಲಿಸಿಗಬೇಕಾದ ಅವಕಾಶ ಮತ್ತು ಮಕ್ಕಳ ಕಲ್ಪನೆಗಳ ಸಿಮೋಲ್ಳಂಘನಕ್ಕೆ ಶಾಲೆಯಲ್ಲಿ ಸಿಗಬೇಕಾದ ಬೆಂಬಲವನ್ನು ರಜಾ ಮೇಳದಲ್ಲಿ ಕೊಡುವ ಪ್ರಯತ್ನ ನಮ್ಮದು.ಈ ಮೇಳ ಮಕ್ಕಳೊಡನೆ ಕಳೆಯಲು ನಮಗೆ ಅವಕಾಶ ಒದಗಿಸಿದೆ..ನಾವು ಮಕ್ಕಳಿಗೆ ಋಣಿಯಾಗಿದ್ದೇವೆ. ಮರೆಯಲಾಗದ ಬಾಲ್ಯದ ಕ್ಷಣಗಳನ್ನು ನಾವವರಿಗೆ ದೇಣಿಗೆಯಾಗಿ ನೀಡದಿದ್ದರೆ ನಮ್ಮ ಮೇಳಕ್ಕೇನು ಅರ್ಥವಿದೆ? 
     ಮಕ್ಕಳೊಡನೆ ಸಂತಸವನ್ನು ಹಂಚಿಕೊಳ್ಳುವುದೂ ಒಂದು ಕಸುಬಾಗಬಾರದು ಎಂಬುದು ನಮ್ಮ ಕಾಳಜಿ


ರಂಗದ ಮೇಲೆ ಅದೆಷ್ಟು ರಂಗು?

ವಾಸು ಸರ್ ಇಂಟರವ್ಯೂ