ಸಮುದಾಯ ಕುಂದಾಪುರ: ವರದಿ

     ಕರ್ನಾಟಕದ ಸಾಂಸ್ಕೃತಿಕ ರಂಗದಲ್ಲಿ ಸಾಮಾಜಿಕ ಜವಾಬ್ಧಾರಿ ಹೊತ್ತು ಸಮಾಜದ ವಿವಿಧ ವರ್ಗಗಳ ಆಶಯಗಳಿಗೆ ಧ್ವನಿಯಾಗಿ ಸಮುದಾಯ ಸ್ಪಂದಿಸುತ್ತಾ ಬಂದಿದೆ. ದೇಶವು ಇಂದು ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ಜನಜಾಗೃತಿಯನ್ನು ಮೂಡಿಸುವ ಜನಾಭಿಪ್ರಾಯವನ್ನು ಕ್ರೋಢೀಕರಿಸುವ ನಿಟ್ಟಿನಲ್ಲಿ ಸಾಹಿತಿ ಕಲಾವಿದರನ್ನು ಒಗ್ಗೂಡಿಸಿ ಸಂಘಟಿಸಬೇಕಾದ ಜವಾಬ್ದಾರಿ ಸಮುದಾಯಕ್ಕಿದೆ. ಈ ನಿಟ್ಟಿನಲ್ಲಿ ಕುಂದಾಪುರ ಸಮುದಾಯವು ಕಳೆದ ಕೆಲವು ತಿಂಗಳಲ್ಲಿ ನಡೆಸಿದ ಕಾರ್ಯಕ್ರಮಗಳ ವಿವರ ಹೀಗಿದೆ.

 ರಜಾ ಶಿಬಿರಗಳು ವ್ಯವಹಾರವಾಗುತ್ತಿರುವ ಈ ಸಂದರ್ಭದಲ್ಲಿ ದಿನಾಂಕ: 7/4/2013 ರಿಂದ 14/4/2013 ರ ವರೆಗೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕುಂದಾಪುರ ಇಲ್ಲಿ ಸರಕಾರಿ ಶಾಲಾ ವಿದ್ಯಾರ್ಥಿಗಳಿಗಾಗಿ ಉಚಿತ ರಂಗ ರಂಗು ರಜಾಮೇಳ ಹಮ್ಮಿಕೊಳ್ಳಲಾಯಿತು.

 50ವಿದ್ಯಾರ್ಥಿಗಳಿದ್ದ ಈ ಶಿಬಿರಕ್ಕೆ ಕುಂದಾಪುರ ಸಮುದಾಯದ ಉಪಾಧ್ಯಕ್ಷರಾದ ಶ್ರೀ ವಾಸುದೇವ ಗಂಗೇg ಅವರು  “ಮಾತುಗಾರ ಮಾಯಣ್ಣ” ನಾಟಕ ತಯಾರಿ ಮಾಡಿದರು. ಶಿಬಿರದಲ್ಲಿ ಪೇಪರ್ ಕ್ರಾಫ್ಟ್, ಯಕ್ಷಗಾನದ ಹೆಜ್ಜೆಗಳು, ರಂಗಗೀತೆಗಳ ತಯಾರಿ ಜಾದೂ ಪ್ರಾತ್ಯಕ್ಷಿಕೆ ಬಣ್ಣದೊಂದಿಗೆ ಆಟ, ಹಾಡು, ಅಭಿನಯಗೀತೆ ಮುಂತಾದ  ಕಾರ್ಯಕ್ರಮಗ¼ನ್ನು ವಿವಿಧ ಸಂಪನ್ಮೂಲ ವ್ಯಕ್ತಿಗಳು ನಡೆಸಿಕೊಟ್ಟರು.

 ರಂಗ ರಂಗು ರಜಾ ಮೇಳದ ನೆನಪಿನ ಸಂಚಿಕೆ
      ಮಾರ್ಚ 27 ರಂದು ವಿಶ್ವ ರಂಗಭೂಮಿ ದಿನಾಚರಣಯನ್ನು ಆಚರಿಸಿದೆವು. ದಾರಿಯೋ ಪೊ ಅವರ ರಂಗಸಂದೇಶ ವಾಚನ ಮತ್ತು ಸಮುದಾಯದ ಸದಸ್ಯರು ಅಭಿನಯಿಸಿದ ರಂಗರೂಪಕದ ಪ್ರದರ್ಶನ ನಡೆಯಿತು. ಸಮುದಾಯದ ಸದಸ್ಯರು ಹಿತೈಶಗಳು ಭಾಗವಹಿಸಿದ್ದರು.

    ತೀರ ಇತ್ತೀಚೆಗೆ ಅಂದರೆ ಆಗಸ್ಟ್ 26 ರಂದು ಸಂಜೆ ಡಾ.ಶ್ರೀಪಾದ ಭಟ್ ಅವರೊಂದಿಗೆ ರಂಗ ವ್ಯಾಖ್ಯಾನ ಕುರಿತು ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದೆವು. ಸಮುದಾಯದ ಸದಸ್ಯರು ಹಿತೈಶಗಳು ಭಾಗವಹಿಸಿದ್ದರು.
      ಕರಾವಳಿಯಲ್ಲಿ ಎಡೆಬಿಡದ ಮಳೆಯ ಕಾರಣವೊ ಎನೋ ಕುಂದಾಪುರ ಸಮುದಾಯ ಸ್ವಲ್ಪ ಮಟ್ಟಿಗೆ ನಿಷ್ಕ್ರಿಯರಾಗಿದ್ದಂತೂ ಸತ್ಯ  
ಸದಾನಂದ ಬೈಂದೂರ್                                                                                       ಉದಯ ಗಾಂವಕಾರ
     ಕಾರ್ಯದರ್ಶಿ                                                                                                        ಅಧ್ಯಕ್ಷರು,
ಸಮುದಾಯ ಕುಂದಾಪುರ                                                                                 ಸಮುದಾಯ ಕುಂದಾಪುರ