ದಿ. ಕೃಷ್ಣಮೂರ್ತಿ ಕಾವ್ರಾಡಿ ನೆನಪಿನಲ್ಲಿ ಕಾವ್ಯರಂಗ ರೂಪಕ ಮತ್ತು ರಂಗಭೂಮಿ ದಿನಾಚರಣೆ. 30 ಮಾರ್ಚ್ 2014

ವಿಶ್ವರಂಗಭೂಮಿ ದಿನದ ಸಂದೇಶ 2014 

ಎಲ್ಲಿ ಮಾನವ ಸಮಾಜ ಇರುತ್ತದೋ ಅಲ್ಲಿ ಅಭಿನಯದ ಅದಮ್ಯ ಚೈತನ್ಯ ಅಭಿವ್ಯಕ್ತಿಸಲ್ಪಡುತ್ತದೆ.
ಮಾನವ ಸಹಜವಾದ ಸಂಕೀರ್ಣತೆ, ವೈವಿಧ್ಯ, ಬಲಹೀನತೆಗಳನ್ನೂ ರಕ್ತ ಮಾಂಸದ ಬದುಕಿನ ಪ್ರತಿ ಉಸಿರು ಮತ್ತು ದನಿಗಳನ್ನು ಅಭಿವ್ಯಕ್ತಿಸುತ್ತಾ ಕ್ಷಣ ಕ್ಷಣವೂ ಬದಲಾಗುವ ರಂಗಭೂಮಿಯನ್ನು ಸೃಷ್ಟಿಸಲು ನಾವು ಪುಟ್ಟ ಪುಟ್ಟ ಹಳ್ಳಿಗಳ ಮರಗಳ ನೆರಳಿನಲ್ಲಿ, ಸುಸಜ್ಜಿತವಾದ ಸುವ್ಯವಸ್ಥಿತವಾದ ಜಾಗತಿಕ ಮುಖ್ಯ ನಗರಗಳಲ್ಲಿ, ಶಾಲಾ ಸಭಾಭವನಗಳಲ್ಲಿ, ಹೊಲಗದ್ದೆಗಳಲ್ಲಿ, ದೇವಾಲಯಗಳಲ್ಲಿ, ಕೊಳಗೇರಿಗಳಲ್ಲಿ, ನಗರದ ವ್ಯಾಪಾರಿ ಸಂಕೀರ್ಣಗಳಲ್ಲಿ, ಸಮುದಾಯ ಕೇಂದ್ರಗಳಲ್ಲಿ ಮತ್ತು ನಗರದ ನೆಲಮನೆಗಳಲ್ಲಿ ಒಂದುಗೂಡುತ್ತೇವೆ.
ಯಾರನ್ನೋ ಯಾವುದನ್ನೋ ನೆನಪಿಸಿಕೊಳ್ಳುತ್ತಾ ಅಳುವುದಕ್ಕೂ ನಾವು ಒಂದುಗೂಡುತ್ತೇವೆ. ದಿಟ್ಟ ದೃಷ್ಟಿಯಲ್ಲಿ ನೋಡುತ್ತಾ  ನಗುವುzಕ್ಕೂ ಒಂದುಗೂಡುತ್ತೇವೆ; ನೆನಪಿಸಿಕೊಳ್ಳುವುದಕ್ಕಾಗಿ, ಪರಸ್ಪರ ಸಹನ ವಿಚಾರಗಳ ಬಗ್ಗೆ ಚಿಂತನೆ ನಡೆಸುವುದಕ್ಕಾಗಿ, ಕಲಿಯುವುದಕ್ಕಾಗಿ, ಯೋಚಿಸುವುದಕ್ಕಾಗಿ, ಊಹಿಸುವುದಕ್ಕಾಗಿ ಒಂದುಗೂಡುತ್ತೇವೆ. ತಾಂತ್ರಿಕ ಕೌಶಲ್ಯಕ್ಕೆ ಬೆರಗುಪಡುವುದಕ್ಕಾಗಿ, ದೇವರನ್ನು ಆವಿರ್ಭವಿಸುವುದಕ್ಕಾಗಿ, ನಮ್ಮ ಸಾಂಘಿಕ ಸಾಮಥ್ರ್ಯವನ್ನು, ಸೌಂದರ್ಯ, ಕಾರುಣ್ಯ ಮತ್ತು ಕ್ರೌರ್ಯಗಳನ್ನು ಹಿಡಿದಿಡುವುದಕ್ಕಾಗಿ, ಸಮರ್ಥರಾಗಲು, ಬಲಿಷ್ಠರಾಗಲು ನಾವು ಒಂದುಗೂಡುತ್ತೇವೆ.
ನಮ್ಮ ವಿವಿಧ ಸಂಸ್ಕøತಿ ಸಂಪತ್ತುಗಳನ್ನು ವೈಭವೀಕರಿಸಲು, ಆಚರಿಸಲು, ನಮ್ಮನ್ನು ಒಡೆಯುವ ಇತಿಮಿತಿಗಳ ಗೋಡೆಗಳನ್ನು ಮುರಿಯಲು ಒಂದುಗೂಡುತ್ತೇವೆ.
ಮಾನವ ಸಮಾಜ ಇರುವಲ್ಲಿ ಅಭಿನಯದ ಅದಮ್ಯ ಚೈತನ್ಯ ಅಭಿವ್ಯಕ್ತವಾಗುತ್ತದೆ. ಸಮುದಾಯವೊಂದರಲ್ಲಿ ಬೇರೆ ಬೇರೆ ಸಂಪ್ರದಾಯಗಳ ಮುಖವಾಡ, ವೇಷ ಭೂಷಣ ತೊಟ್ಟು ವಿಜೃಂಭಿಸುತ್ತದೆ. ಅದು ನಮ್ಮ ಭಾಷೆ, ಲಯ, ಭಾವಭಿನಯಗಳನ್ನು ಪರಿಷ್ಕರಿಸುತ್ತದೆ, ನಮ್ಮ ನಡುವಣ ಅಂತರವನ್ನು ಹೋಗಲಾಡಿಸುತ್ತದೆ.
ರಂಗಭೂಮಿಯೆಂಬ ಈ ಮಾನವನ ಹುಟ್ಟಿನಷ್ಟೇ ಹಳೆಯದಾದÀ  ಸ್ಪೂರ್ತಿಯೊಂದಿಗೆ ಬದುಕುವ ಕಲಾವಿದರಾದ ನಾವು ಅಷ್ಟೇ ಪ್ರಾಚೀನವಾದ ಸ್ಪೂರ್ತಿಯೊಂದಿಗೆ, ಹೃದಯ ಪೂರ್ವಕವಾಗಿ ಬದ್ಧತೆಯಿಂದ ನಮ್ಮ ಯೋಚನೆ ಮತ್ತು ಶರೀರಗಳನ್ನು ವಾಸ್ತವ ಮತ್ತು ಝಗಮಗಿಸುವ ಕೌತುಕಗಳನ್ನು ಬಿಚ್ಚಿಡುವುದಕ್ಕಾಗಿ ಕೆಲಸ ಮಾಡುತ್ತೇವೆ.
ಆದರೆ, ಪ್ರಸಕ್ತ ಕಾಲಗಟ್ಟದಲ್ಲಿ ಮಿಲಿಯಗಟ್ಟಲೆ ಜನರು ಬದುಕುಳಿಯುವುದಕ್ಕಾಗಿ ಹೋರಾಡುತ್ತಿದ್ದಾರೆ ಮತ್ತು ಶೋಷಕ ಆಳ್ವಿಕೆಯಲ್ಲಿ ನರಳುತ್ತಾ, ಬಂಡವಾಳಶಾಹಿಯಲ್ಲಿ ನರಳುತ್ತಾ, ಹೋರಾಟ-ಕಷ್ಟಗಳಿಂದ ಪಾರಾಗಲು ಯತ್ನಿಸುತ್ತಾ ಇದ್ದಾರೆ. ಇಂಥ ಜಗತ್ತಿನಲ್ಲಿ ನಮ್ಮ ಖಾಸಗೀ ಬದುಕಿನಲ್ಲಿ ಅತಿಕ್ರಮ ಪ್ರವೇಶವಾಗುತ್ತಿದೆ, ಮಾತುಗಳು ಕೂಡಾ ಸರಕಾರಗಳಿಂದ ಸೆನ್ಸಾರಿಗೊಳಪಟ್ಟಿವೆ. ಕಾಡುಗಳು ನಾಶವಾಗಿವೆ, ಮೃಗ ಸಂಕುಲಗಳು ನಿರ್ನಾಮವಾಗಿವೆÉ. ಸಾಗರಗಳು ವಿಷಪೂರಿತವಾಗಿದೆ. ಇಂಥ ಸಂದರ್ಭದಲ್ಲಿ ನಾವೇನನ್ನು ತೆರೆದಿಡಲು ಬದ್ಧರಾಗಿದ್ದೇವೆ?
ಅಧಿಕಾರ ತಾರತಮ್ಯದ ಈ ಜಗತ್ತಿನಲ್ಲಿ, ಸರ್ವಾಧಿಕಾರಿ ಆಡಳಿತದ ಬೇರೆ ಬೇರೆ ಪದ್ಧತಿಗಳು ಯಾವುದೋ ಒಂದು ರಾಷ್ಟ್ರ, ಒಂದು ಜನಾಂಗ, ಒಂದು ಲಿಂಗ, ಒಂದು ಧರ್ಮ, ಒಂದು ತತ್ವ, ಒಂದು ಸಾಂಸ್ಕøತಿಕ ಚೌಕಟ್ಟು ಉಳಿದೆಲ್ಲದಕ್ಕಿಂತಲೂ ಉತ್ಕøಷ್ಟವೆಂದು ಹೇಳಿದರೂ, ವಾಸ್ತವದಲ್ಲಿ ಕಲೆ ಇಂತಹ ಸಾಮಾಜಿಕ ನಡಾವಳಿಗಳಿಂದ ವಿಚಲಿತವಾಗದಷ್ಟು ಸುರಕ್ಷಿತವಾಗಿದೆಯೇ?
 ರಂಗಕಲಾವಿದರಾದ ನಾವು, ಮಾರುಕಟ್ಟೆಯ ಬೇಡಿಕೆಗಳನ್ನು ಪೋರೈಸುವ ಜರೂರಿನಲ್ಲಿ, ಸಿಕ್ಕ ಅಧಿಕಾರವನ್ನು ಅಪ್ಪಿಕೊಳ್ಳುವ ಬರದಲ್ಲಿ, ನಮ್ಮ ಶಕ್ತಿಯನ್ನು ಸಮಾಜದ ಹೃದಯ ಮತ್ತು ಮನಸ್ಸುಗಳ ನಡುವಿನ ಅಂತರ ಕಿರಿದುಗೊಳಿಸಲು ಬಳಸಿಕೊಳ್ಳುತ್ತಿದ್ದೇವೆಯೇ? ನಮ್ಮ ಸುತ್ತಲ ಜನರನ್ನು ಒಗ್ಗೂಡಿಸಲು, ಪ್ರೇರೇಪಿಸಲು, ಸ್ವಚ್ಚ, ಸುಂದರ, ವಿಶಾಲಹೃದಯದ ಸೌಹಾರ್ದಯುತ ಜಗತ್ತನ್ನು ಸೃಷ್ಟಿಸಲು, ಬದಲಾವಣಿಯ ಮಂತ್ರ ಪಠಿಸಲು ರಂಗಭೂಮಿಯನ್ನು ಮತ್ತು ಅಭಿನಯ ಚೈತನ್ಯವನ್ನು ವಿನಿಯೋಗಿಸುತ್ತಿದ್ದೇವೆಯೆ?
-ಬ್ರೆಟ್ ಬೈಲಿ                        
ಬ್ರೆಟ್ ಬೈಲಿ ದಕ್ಷಿಣ ಆಫ್ರಿಕದ ನಾಟಕಕಾರ, ವಿನ್ಯಾಸಕಾರ, ರಂಗನಿರ್ದೇಶಕ, ಇನಸ್ಟಾಲ್ಲೇಷನ್ ಕಲಾವಿದ ಮತ್ತು ಹೆಸರಾಂತ ಥರ್ಡವರ್ಡ ಬನ್ ಫೈಟ್‍ನ ಕಲಾನಿರ್ದೇಶಕ. ಆಫ್ರಿಕಾದ ತುಂಬೆಲ್ಲ ಓಡಾಡಿಕೊಂಡು ಕಲೆಗಾಗಿ ಕೆಲಸಮಾಡಿದ ಕಲಾವಿದ. ವಸಾಹತೋತ್ತರ ಜಗತ್ತಿನ ತಲ್ಲಣಗಳನ್ನು ಬಹುಆಯಾಮದಲ್ಲಿ ತೋರಿಸಿದ ಇವರ ನಾಟಕಗಳಾದ ಬಿಗ್‍ದಾದಾ, ಇಪಿ ಝೊಂಬಿ, ಇಮುಂಬೋ ಜಂಬೋ, ಮೀಡಿಯಾ, ಒರೆಫಸ್ ಬಹು ಪ್ರಸಿದ್ಧಿ ಪಡೆದಿವೆ. `ಎಕ್ಸಿಬಿಟ್ಸ್ ಎ ಎಂಡ್ ಬಿ’ ಇವರ ಅತ್ಯುತ್ಕøಷ್ಟ ಇನಸ್ಟಾಲ್ಲೇಷನ್ ಕಲೆಗಳಲ್ಲೊಂದು. ಬ್ರೆಟ್ ಬೈಲಿ  2009 ರಲ್ಲಿ ಜೋಹಾನ್ಸ್‍ಬರ್ಗ್‍ನಲ್ಲಿ ಮತ್ತು 2006 ರಿಂದ 2009 ರವರೆಗೆ ಹರಾರೆಯಲ್ಲಿ ನಡೆದ ಜಾಗತಿಕ ಕಲೆ ಮತ್ತು ಸಂಸ್ಕøತಿ ಮೇಳಗಳ ಪ್ರಾರಂಭ ಪ್ರದರ್ಶಗಳನ್ನು ನಿರ್ದೇಶಿಸುವ ಗೌರವ ಪಡೆದಿದ್ದರು. 2014 ರ ವಿಶ್ವ ರಂಗಭೂಮಿ ದಿನಾಚರಣೆಯ ಸಂದೇಶವನ್ನು ನೀಡಲು ಯುನೆಸ್ಕೋ ಇವರನ್ನು ಆಹ್ವಾನಿಸಿತು.

ಸಮುದಾಯ ಕುಂದಾಪುರ_____________________________________________________________________________
ಎಲ್ಲಿಂದ ಬಂದಿರೆಂದು ಕೇಳಬಹುದು ನೀವು
ಜನರ ನಡುವಿನಿಂದ ಎಂದು ಹೇಳುತೇವೆ ನಾವು
ಮತ್ತೆ ಪಯಣ ಎಲ್ಲಿಗೆಂದು ಕೇಳಬಹುದು ನೀವು
ತಿರುಗಿ ಮತ್ತೆ ಜನರ ನಡುವೆ ಹೋಗುತೇವೆ ನಾವು

  ತುರ್ತುಪರಿಸ್ಥಿತಿಯ ಹಿನ್ನೆಲೆಯಲ್ಲಿ ಒಂದು ರಂಗ ತಂಡವಾಗಿ ಆರಂಭಗೊಂಡ ಸಮುದಾಯ `ಕಲೆ ಕಲೆಗಾಗಿ ಅಲ್ಲ, ಜನತೆಗಾಗಿ ಕಲೆ’ ಎಂಬ ಧ್ಯೇಯ ದೊಂದಿಗೆ ಜನತೆಯ ನೋವು ನಲಿವುಗಳಿಗೆ ಸ್ಪಂದಿಸುತ್ತಾ, ಬೀದಿ ನಾಟಕ, ಜಾಥಾ ಗಳನ್ನು ಮಾಡುತ್ತಾ ಸಾಂಸ್ಕೃತಿಕ ಭೂಪಟದಲ್ಲಿ ಗುರುತಿಸಿಕೊಂಡಿದೆ.
  ಹೊಸ ಮೌಲ್ಯಗಳತ್ತ ಸಮುದಾಯ ಜಾಥಾ, ರೈತನತ್ತ ಸಮುದಾಯದ ಜಾಥಾ, ಅಣುಸಮರ ವಿರೋಧಿ ಬಣ್ಣದ ಜಾಥಾ, ಭೀಕರ ಬರದ ಎದುರು ಸಮುದಾಯದ ಜಾಥಾ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳ ಮೂಲಕ ಜನತೆಯ ಸಂಕಷ್ಟಗಳಿಗೆ ಸಾಂಸ್ಕೃತಿಕವಾಗಿ ಪ್ರತಿಕ್ರಿಯಿಸಿದೆ. ಕಬೀರ, ಹಿಂಸಾಹಿ ಪರಮೋಧರ್ಮ, ಮೆರವಣಿಗೆ, ಕುಲಂ, ಸುಲ್ತಾನ್ ಟಿಪ್ಪು  ಸಮುದಾಯ ಪ್ರದರ್ಶಿಸಿದ ಮಹತ್ವದ ನಾಟಕಗಳು.
    ಜನರ ನಡುವೆ ನಿಂತು ಸಾಂಸ್ಕೃತಿಕ ವಾಗ್ವಾದವನ್ನು ಹುಟ್ಟುಹಾಕುವ ಮೂಲಕ ಜನರಿಗೆ ದನಿಯಾಗುವ ಸಮುದಾಯ, ಕಲೆಯ ಮೂಲಕ ಜನರ ದನಿಗೆ ಚೈತನ್ಯವನ್ನು ತುಂಬುವ ಕೆಲಸದಲ್ಲಿಯೂ ನಿರತವಾಗಿದೆ.
ಅಧ್ಯಕ್ಷ
ಉದಯ ಗಾಂವಕಾರ
ಉಪಾಧ್ಯಕ್ಷ
ವಾಸುದೇವ ಗಂಗೇರ
ಕಾರ್ಯದರ್ಶಿ
 ಸದಾನಂದ ಬೈಂದೂರು
ಸಂಘಟನಾ ಕಾರ್ಯದರ್ಶಿ
ಜಿ.ವಿ.ಕಾರಂತ
ಕೋಶಾಧಿಕಾರಿ
ಬಾಲಕೃಷ್ಣ ಕೆ.ಎಂ
ಜೊತೆ ಕಾರ್ಯದರ್ಶಿ
ಶಂಕರ ಆನಗಳ್ಳಿ
ಕಾರ್ಯಕಾರಿ ಸಮಿತಿ ಸದಸ್ಯರು
ಎಚ್.ನರಸಿಂಹ, ರವಿ.ವಿ.ಎವಉತ್ಕಲಾ, ಸುಧಾಕರ ಕಾಂಚನ್
ಅಭಿಲಾಷಾ, ಕೃಷ್ಣರಾಜ ಕರಬ, ವಿಕ್ರಂ, ರಾಘವೇಂದ್ರ ಎಸ್

ಸಮುದಾಯ ಸಾಂಸ್ಕøತಿಕ ಸಂಘಟನೆ; ಕುಂದೇಶ್ವರ ದೇವಸ್ಥಾನದ ಎದುರು, ಮುಖ್ಯ ರಸ್ತೆ
ಕುಂದಾಪುರ ಚರವಾಣಿ 9964281693,ಮಿಂಚಂಚೆ samudayakundapura@gmail.com