ಅನಂತಪ್ರಜ್ಞೆ


ಸೆಪ್ಟಂಬರ್ 24 ಕ್ಕೆ ಸರಕಾರಿ ರಜೆ. ಆ ದಿನ ಒಂದಿಷ್ಟು ಸಾಹಿತ್ಯ ಸಂವಾದ ನಡೆಸೋಣ! ಈ ಮಾತುಕತೆಗೆ ಅನಂತಮೂರ್ತಿಯವರ ಸ್ಮರಣೆ ಬರೀ ನೆವವಲ್ಲ;ಪ್ರೇರಣೆ. ಸಾಧ್ಯವಾದರೆ, ಅನಂತಮೂರ್ತಿಯವರನ್ನು ಅವರ ಕೃತಿಗಳ ಮೂಲಕ ಹುಡುಕೋಣ. ಸಂಸ್ಕಾರ, ಭಾರತೀಪುರ, ಭವ, ಪ್ರಜ್ಞೆ ಮತ್ತು ಪರಿಸರ, ಸದ್ಯ ಮತ್ತು ಶಾಶ್ವತ, ಮಾತುಸೋತ ಭಾರತ.. ಯಾವುದನ್ನೂ ಓದಿಕೊಂಡಿದ್ದರೂ ಅಡ್ಡಿಯಿಲ್ಲ;ಓದಿಲ್ಲದಿದ್ದರೂ ಪರ್ವಾಗಿಲ್ಲ.ಪುಸ್ತಕಗಳಿಗೆ ಮತ್ತು ಚಿಂತನೆಗಳಿಗೆ ಸಾವಿಲ್ಲ..ದಯವಿಟ್ಟು ಬನ್ನಿ. ಮಾತಿಗೆ ಮಾತು ಸೇರಿಸೋಣ!
ಚಲನ ಚಿತ್ರ ಪ್ರದರ್ಶನ-ಸಂಸ್ಕಾರ
ಮಾತುಕತೆಯಲ್ಲಿ- ಜಿ.ರಾಜಶೇಖರ.ಪಟ್ಟಾಭಿರಾಮ ಸೋಮಯಾಜಿ,ರಾಜಾರಾಮ ತೊಳ್ಪಾಡಿ, ಮಹಾಬಲೇಶ್ವರ ರಾವ್ ಮತ್ತು ನಾವು-ನೀವೆಲ್ಲ.
ಕಲಾಮಂದಿರ|ಜೂನಿಯರ್ ಕಾಲೇಜು,ಕುಂದಾಪುರ| ಬೆಳಗ್ಗೆ 9.30 ರಿಂದ ಅಪರಾಹ್ನ 5.00

ಸೂಚನೆ: ದಯವಿಟ್ಟು ನಿಮ್ಮ ಬರುವಿಕೆಯನ್ನು ಖಾತ್ರಿಪಡಿಸಿ ಸಹಕರಿಸಿ. ಕರೆಮಾಡಿ-9448109674
 —