ಕುಂದಾಪುರದಲ್ಲಿ ವಾಚನಾಭಿರುಚಿ ಕಮ್ಮಟ


ವಾಚನಾಭಿರುಚಿ ಕಮ್ಮಟ:

ಪುಸ್ತಕ ಪ್ರಾಧಿಕಾರ, ಬೆಂಗಳೂರು ಸಾಹಿತ್ಯ ಸಮುದಾಯ ಮತ್ತು ಸಮುದಾಯ ಸಾಂಸ್ಕೃತಿಕ ಸಂಘಟನೆ, ಕುಂದಾಪುರ ಇವರ ಸಹಕಾರದೊಂದಿಗೆಬಹಳ ಹೆಮ್ಮೆಯಿಂದ ಕುಂದಾಪುರ ಸಮುದಾಯವು ರಾಜ್ಯಮಟ್ಟದ ಕಮ್ಮಟವೊಂದನ್ನು ಸಂಘಟಿಸುತ್ತಿದೆ. 
ಫೆಬ್ರುವರಿ 28, 01 ಮಾರ್ಚ 2015 ದಂದು ಅಡಿಯೋ ವಿಷುವಲ್ ಹಾಲ್, ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ ಇಲ್ಲಿ ಏರ್ಪಡಿಸಲಾಗಿರುವ ವಿಚಾರ ಸಾಹಿತ್ಯದ ಓದು ಮತ್ತು ವಿಮರ್ಶೆ ಕುರಿತು ವಾಚನಾಭಿರುಚಿ ಕಮ್ಮಟದ ಮೂಲಕ ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಮತ್ತು ಸಾಹಿತ್ಯಾಸಕ್ತರಿಗೆ ವಿಚಾರವಾದದ ಸ್ವರೂಪ ಮತ್ತು ಅಭಿವ್ಯಕ್ತಿಯ ಕುರಿತು ಸ್ಪಷ್ಟ ಗ್ರಹಿಕೆ ಮತ್ತು ದೃಷ್ಟಿಕೋನಗಳನ್ನು ಒದಗಿಸುವುದು ಈ ಕಮ್ಮಟದ ಉದ್ಧೇಶ. ಕನ್ಡಡದ ವೈಚಾರಿಕ ಸಾಹಿತ್ಯಪಠ್ಯಗಳನ್ನು ಹಿನ್ನೆಲೆಯಾಗಿ ತೆಗೆದುಕೊಂಡು ಈ ಕಮ್ಮಟದಲ್ಲಿ ನಡೆಸುವ ಚರ್ಚೆಯ ಬೆಳಕಿನಲ್ಲಿ ಓದು ಸಂಸ್ಕೃತಿಯನ್ನು ಮರುರೂಪಿಸುವ ಮತ್ತು ವಾಚನಾಭಿರುಚಿಯನ್ನು ಉದ್ಧೀಪಿಸುವ ಉದ್ಧೇಶವಿದೆ. ಸಾಹಿತ್ಯ ಕೃತಿಯೊಂದರ ಓದಿಗೆ ಪೂರಕವಾದ ಮಾನಸಿಕ ಸಿದ್ಧತೆನ್ನು ರೂಪಿಸುವ ಮತ್ತು ಶಿಬಿರಾರ್ಥಿಗಳ ಗ್ರಹಿಕೆಯ ಸಾಧ್ಯತೆಗಳನ್ನು ವಿಸ್ತರಿಸುವ ಪ್ರಯತ್ನವಾಗಿ ಕಮ್ಮಟವು ಕಾಯ್ಕಿಣಿ, ಕಾರಂತ ಸಾರಾ, ಆರ್. ವಿ. ಭಂಡಾರಿಯವರ ಸಾಹಿತ್ಯ ಪಠ್ಯಗಳಿಗೆ ಚರ್ಚೆಯನ್ನು ಮಿತಿಗೊಳಿಸಿಕೊಳ್ಳುತ್ತದೆ ಅಥವಾ ಈ ಸಾಹಿತ್ಯ ಪಠ್ಯಗಳ ಮೂಲಕವೇ ವಿಚಾರ ಸಾಹಿತ್ಯದ ಸಾರ್ಥಕ ಓದಿಗೆ ಪ್ರವೇಶಪಡೆಯುತ್ತದೆ.

ಕಮ್ಮಟದ ಉದ್ಘಾಟನಾ ಸಭೆಯು 28 ಫೆಬ್ರವರಿ 2015 (ರಾಷ್ಟ್ರೀಯ ವಿಜ್ಞಾನ ದಿನಾಚರಣೆ) ರಂದು ಪೂ 10.30 ಕ್ಕೆ ನಡೆಯಲಿದೆ. ಎಲ್ಲ ಸಾಹಿತ್ಯಾಸಕ್ತರಿಗೂ ಉದ್ಘಾಟನಾ ಕಾರ್ಯಕ್ರಮಕ್ಕೆ ಸ್ವಾಗತ.

ವಿವರಗಳಿಗಾಗಿ ಮುಂದೆ ಓದಿ-
_________________________________________________________
ವಾಚನಾಭಿರುಚಿ ಕಮ್ಮಟ

ದಿನಾಂಕ: 28.02.2015 ಮತ್ತು 01.03.2015
ಆಡಿಯೋ ವಿಷುವಲ್ ಹಾಲ್, ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ


ವೈಚಾರಿಕ ಸಾಹಿತ್ಯ : ಓದು ಮತ್ತು ವಿಶ್ಲೇಷಣೆ

ಉದ್ಘಾಟನೆ 
ಪ್ರೊ. ವಿ.ಎನ್. ಲಕ್ಷ್ಮೀನಾರಾಯಣ, 
ಮೈಸೂರು

ಮುಖ್ಯ ಅತಿಥಿಗಳು
ನಾಡೋಜ ಡಾ. ಸಾರಾ ಅಬೂಬಕ್ಕರ್ 
ಲೇಖಕರು, ಮಂಗಳೂರು

ಡಾ. ಎಚ್. ಶಾಂತಾರಾಮ
ಆಡಳಿತಾಧಿಕಾರಿ, ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್

ಪ್ರಸ್ತಾವನೆ
ಶ್ರೀಮತಿ ಮಾಧವಿ ಭಂಡಾರಿ ಕೆರೆಕೋಣ
ಸದಸ್ಯರು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು

ಆಶಯ ನುಡಿ
ಡಾ. ಎಂ.ಜಿ. ಹೆಗಡೆ, ಕುಮಟಾ
ಕಮ್ಮಟದ ನಿರ್ದೇಶಕರು

ಅಧ್ಯಕ್ಷತೆ
ಡಾ. ಬಂಜಗೆರೆ ಜಯಪ್ರಕಾಶ
ಮಾನ್ಯ ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು

ತಮಗೆ ಆದರದ ಸ್ವಾಗತ
ಶ್ರೀಮತಿ ಮಾಧವಿ ಭಂಡಾರಿ ಕೆರೆಕೋಣ ಸೌಭಾಗ್ಯ
ಸದಸ್ಯರು ಹಾಗೂ ಸಂಚಾಲಕರು ಆಡಳಿತಾಧಿಕಾರಿ (ಪ್ರ)


ಸಂಘಟನೆ 
ಸಾಹಿತ್ಯ ಸಮುದಾಯ ಮತ್ತು ಸಮುದಾಯ ಸಾಂಸ್ಕøತಿಕ ಸಂಘಟನೆ, ಕುಂದಾಪುರ 
ಸಂಪರ್ಕ : 9481509699 / udayagaonkar@gmail.com


ದಿನಾಂಕ: 28.02.2015 ಮಧ್ಯಾಹ್ನ 2.00
ಗೌರೀಶ್ ಕಾಯ್ಕಿಣಿಯವರ ಓದು
ಪ್ರೊ. ವರದೇಶ ಹಿರೇಗಂಗೆ 
ನಿರ್ದೇಶಕರು, ಗಾಂಧಿ ಮತ್ತು ಶಾಂತಿ ಅಧ್ಯಯನ ಕೇಂದ್ರ, ಮಣಿಪಾಲ ವಿಶ್ವವಿದ್ಯಾಲಯ

ದಿನಾಂಕ: 01.03.2015 ಬೆಳಗ್ಗೆ 9.30
ಶಿವರಾಮ ಕಾರಂತರ ಓದು
ಡಾ. ಕೆ. ಕೇಶವ ಶರ್ಮ
ಅಧ್ಯಕ್ಷರು, ಕನ್ನಡ ಭಾರತಿ, ಕುವೆಂಪು ವಿ.ವಿ., ಶಿವಮೊಗ್ಗ

ಮಧ್ಯಾಹ್ನ 12.00
ಆರ್.ವಿ. ಭಂಡಾರಿಯವರ ಓದು
ಡಾ. ಡೊಮಿನಿಕ್
ಪ್ರಾಧ್ಯಾಪಕರು, ಬೆಂಗಳೂರು

ಮಧ್ಯಾಹ್ನ 2.00
ಸಾರಾ ಅಬೂಬಕ್ಕರ್‍ರವರ ಓದು
ಡಾ. ನಿಕೇತನ
ಪ್ರಾಚಾರ್ಯರು, ಸರ್ಕಾರಿ ಪದವಿ ಮಹಾವಿದ್ಯಾಲಯ, ತೆಂಕನಿಡಿಯೂರು

ಮಧ್ಯಾಹ್ನ : 3.30
ಸಮಾರೋಪ ಸಮಾರಂಭ

ಅಧ್ಯಕ್ಷತೆ
ಡಾ. ನಾರಾಯಣ ಶೆಟ್ಟಿ 
ಪ್ರಾಂಶುಪಾಲರು
ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ

ಅತಿಥಿಗಳು
ಡಾ. ಭಾಸ್ಕರ ಮಯ್ಯ
ಚಿಂತಕರು, ಕುಂದಾಪುರ

ವಸಂತರಾಜ ಎನ್.ಕೆ.
ರಾಜ್ಯ ಸಂಚಾಲಕರು
ಸಾಹಿತ್ಯ ಸಮುದಾಯ, ಬೆಂಗಳೂರು

ಉದಯ ಗಾಂವಕಾರ
ಅಧ್ಯಕ್ಷರು
ಸಮುದಾಯ ಸಾಂಸ್ಕøತಿಕ ಸಂಘಟನೆ, ಕುಂದಾಪುರ

_________________________________

ನೋಂದಣಿಗಾಗಿ ಈ ಗೂಗಲ್ online ನಮೂನೆಯನ್ನು ತುಂಬಿಸಲೂಬಹುದು-ಇಲ್ಲಿ ಕ್ಲಿಕ್ ಮಾಡಿ

ಕಮ್ಮಟದ ಉದ್ಘಾಟನಾ ಸಭೆಯು 28 ಫೆಬ್ರವರಿ 2015 (ರಾಷ್ಟ್ರೀಯ ವಿಜ್ಞಾನ ದಿನಾಚರಣೆ) ರಂದು ಪೂ 10.30 ಕ್ಕೆ ನಡೆಯಲಿದೆ. ಎಲ್ಲ ಸಾಹಿತ್ಯಾಸಕ್ತರಿಗೂ ಉದ್ಘಾಟನಾ ಕಾರ್ಯಕ್ರಮಕ್ಕೆ ಸ್ವಾಗತ.