ಕಾರಂತರ “ನಮ್ಮ ಅಳತೆಯನ್ನು ಮೀರಲಾರದದೇವರು” ನನ್ನ ವಿಚಾರದ ದಿಕ್ಕನ್ನೇ ಬದಲಾಯಿಸಿತು
ವರದಿ-ವಸಂತರಾಜ ಕಡೆಕಾರ
******************************************************************************

“ವಿಚಾರ ಸಾಹಿತ್ಯ–ಓದು ಹಾಗೂ ವಿಶ್ಲೇಷಣೆ” ಎಂಬ ವಾಚನಾಭಿರುಚಿಕಮ್ಮಟದಲ್ಲಿ ಈ ಶೀರ್ಷಿಕೆಯ ಪ್ರತಿಯೊಂದು ಶಬ್ದ ಮಾತ್ರವಲ್ಲ, ಮಂಡಿಸಲಾದ ನಾಲ್ಕೂ ಪಠ್ಯಗಳೂ ಪ್ರಶ್ನೆಗೆ ಏರುದನಿಯ ಬಿಸಿ ಬಿಸಿ ಚರ್ಚೆಗೆ ವಾಗ್ವಾದಕ್ಕೆ ಒಳಪಟ್ಟವು - ಉದ್ಘಾಟನಾ ಸಮಾರಂಭದಿಂದ ಸಮಾರೋಪದ ವರೆಗೆ, ನಾಲ್ಕೂ ಪಠ್ಯಗಳ ಓದು ಮತ್ತು ವಿಶ್ಲೇಷಣೆಯ ಪ್ರಕ್ರಿಯೆಯಲ್ಲೂ. ಮೇಲೆ ಹೇಳಿದ ಕಾರಂತರ ದೇವರ ಬಗೆಗಿನ ಪಠ್ಯ ಅವುಗಳಲ್ಲಿ ಒಂದು ಆಗಿತ್ತು. ಈ ಕಮ್ಮಟದಲ್ಲಿ ಭಾಗವಹಿಸಿದ 50ಕ್ಕೂ ಹೆಚ್ಚು ಸ್ನಾತಕ ಸ್ನಾತಕೋತ್ತರ ಬಿ.ಎಡ್. ವಿದ್ಯಾರ್ಥಿಗಳು, ಅಧ್ಯಾಪಕರು, ಸಾಹಿತ್ಯಾಸÀಕ್ತರುಗಳಿಗೆ ಇದೊಂದು ಹೊಸ ಲೋಕ ತೆರೆಸಿತು. ಇದು ನಡೆದದ್ದು ಕನ್ನಡ ಪುಸ್ತಕ ಪ್ರಾಧಿಕಾರ ಕುಂದಾಪುರದಲ್ಲಿ ಸಾಹಿತ್ಯ ಸಮುದಾಯ, ಸಮುದಾಯ-ಕುಂದಾಪುರ ಮತ್ತು ಭಂಡಾರಕರ್ಸ್ ಕಾಲೇಜಿನ ಸಹಕಾರದೊಂದಿಗೆ ಏರ್ಪಡಿಸಿದ ಕಮ್ಮಟದಲ್ಲಿ.
ರುಚಿಯಂತೆಯೇ ಅಭಿರುಚಿ ಸಹ ಹುಟ್ಟಿನಿಂದ ಬರುವಂತಹುದಲ್ಲ. ಬೆಳೆಸಿಕೊಳ್ಳಬೇಕಾದ್ದು. ಓದುವ ಬರೆಯುವ ಅಭಿರುಚಿಗೂ ಇದು ಅನ್ವಯಿಸುತ್ತದೆ. ಈ ಅಭಿರುಚಿ ಬೆಳೆಸಿಕೊಂಡಾಗ ಮಾತ್ರ ಓದಿನ ನಂತರಅದು ನಮ್ಮೊಳಗೆ ಬೆಳೆಯುತ್ತದೆ. ಅದನ್ನು ಬೇರೆಯವರೊಡನೆಚರ್ಚಿಸುವ ಮೂಲಕ ಅದು ನಮ್ಮೊಳಗೆ ಪುನಸೃಷ್ಟಿಯಾಗುತ್ತದೆ. ಎಂದು ಕಮ್ಮಟದ  ಆಶಯ ನುಡಿಗಳನ್ನು ಆಡಿದವರು ಕಮ್ಮಟದ ನಿರ್ದೇಶಕ ಡಾ.ಎಂ.ಜಿ. ಹೆಗಡೆ. ಈ ಕಮ್ಮಟದಲ್ಲಿ ಆಯ್ಕೆ ಮಾಡಲಾದ ನಾಲ್ಕು ಪಠ್ಯಗಳಲ್ಲಿ ಕನ್ನಡ ವಿಚಾರ ಸಾಹಿತ್ಯದ ಮೂರು ಆಯಾಮಗಳನ್ನು ಹಿಡಿದಿಡಲುಪ್ರಯತ್ನಿಸಲಾಗಿದೆ ಎಂದು ಡಾ. ಹೆಗಡೆ ವಿವರಿಸಿದರು. ಕನ್ನಡ ವಿಚಾರ ಸಾಹಿತ್ಯದಪರಿಕಲ್ಪನೆ ಸ್ಥಾನಮಾನ, ಗ್ರಹಿಸುವ ರೀತಿÀ ಬೆಳೆದು ಬಂದಬಗೆಯನ್ನು ಅದುಕಂಡ ಹಲವು ಅರ್ಥಪಲ್ಲಟಗಳು ಒಂದುಆಯಾಮ. ರಾಷ್ಟ್ರೀಯತೆಯ ಪರಿಕಲ್ಪನೆಯ ಬಗ್ಗೆ ಬೆಳೆದು ಬಂದ ವಾಗ್ವಾದಗಳು, ಬೇರೆ ಬೇರೆ ಕಾಲಘಟ್ಟಗಳಲ್ಲಿ ಅದಕ್ಕೆ ಬೇರೆ ಬೇರೆ ಜನವಿಭಾಗಗಳು ಕೊಟ್ಟ ನಿರೂಪಣೆ, ಪ್ರತಿಕ್ರಿಯಿಸಿದ ರೀತಿಇತ್ಯಾದಿ ಎರಡನೇಯದು. ಏರುದನಿಯ ಮಂಡನೆಯಿಂದ ಹಿಡಿದು, ವಾಗ್ವಾದ, ಸಂವಾದ, ಮೆಲುದನಿಯ ಸ್ವಗತದವರೆಗೆ ವಿಚಾರ ಸಾಹಿತ್ಯದ ವಿವಿಧ ಶೈಲಿಗಳನ್ನು ಗುರುತಿಸುವುದು ಮೂರನೇಯದು.
ಕಮ್ಮಟದ ಉದ್ಘಾಟನೆ ಮಾಡುತ್ತಾ ಪ್ರೊ. ವಿ. ಎನ್. ಲಕ್ಷ್ಮಿನಾರಾಯಣ ಅವರು ವಿಚಾರ ಸಾಹಿತ್ಯವನ್ನು ಭಿನ್ನವಾಗಿ ನಿರ್ವಚಿಸಿದರು.  ‘ವಿಚಾರ’ ಇಂದ್ರಿಯಗಳಿಂದ ಗ್ರಹಿಸಿದ್ದನ್ನು ವಿಂಗಡಿಸುವುದು, ಎಲ್ಲವನ್ನೂ ಪ್ರಶ್ನಿಸುವುದು, ಸಮಗ್ರವಾಗಿ ನೋಡುವುದು ಎಂದು ಅವರು ವಿವರವಾಗಿ ವ್ಯವಸ್ಥಿತವಾಗಿ ನಿರ್ವಚಿಸಿದರು. ವಿಚಾರ ಸಾಹಿತ್ಯಓದುವುದು ಎಂದರೆ ತಾಯಿ-ಕುಟುಂಬ ಮತ್ತು ಗುರು-ಹಿರಿಯರು ಮೂಡಿಸಿದ ‘ನಂಬಿಕೆ’ಯನ್ನು ಪ್ರಶ್ನಿಸಿ ಅವುಗಳನ್ನು ಅವರು ಹಾಕಿ ಕೊಟ್ಟ ಚೌಕಟ್ಟುಗಳನ್ನು ಬಿಟ್ಟು ಹೊಸ ಚೌಕಟ್ಟುಗಳಲ್ಲಿ ಪರಿಶೀಲನೆಗೆ ಒಡ್ಡುವುದು ಎಂದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಾಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಬಂಜಗೆರೆ ಜಯಪ್ರಕಾಶ ಕಮ್ಮಟಕ್ಕೆ ಆಯ್ದುಕೊಂಡ ಗೌರೀಶಕಾಯ್ಕಿಣಿಯವರ ಪಠ್ಯದ ಒಂದು ಭಾಗದ ಸಮಕಾಲೀನ ಮಹತ್ವವನ್ನುಎತ್ತಿ ತೋರಿಸಿದರು. “ಪಾಶ್ಚಾತ್ಯ ಸಂಸ್ಕøತಿ ಭೌತವಾದಿ ಮತ್ತು ಕಾಮುಕ. ಭಾರತೀಯ ಸಂಸ್ಕøತಿ ಆಧ್ಯಾತ್ಮಿಕ” ಎಂಬ ವಾದವನ್ನು ಅವರುv Àರ್ಕಬದ್ಧವಾಗಿ ಖಂಡಿಸಿದ್ದನ್ನು ತಿಳಿಸಿ ಈಗಲೂ ಅದೇ ವಾದ-ಪ್ರತಿವಾದ ನಡೆಯುತ್ತಿದೆ ಎಂದು ಎತ್ತಿ ತೋರಿಸಿದರು. ಭಗವದ್ಗೀತೆ ರಾಷ್ಟ್ರೀಯಗ್ರಂಥವಾಗಲು ಸಾಧ್ಯವಿಲ್ಲ ಎಂದು ಪ್ರಧಾನಿ ಪಾರ್ಲಿಮೆಂಟಿನಲ್ಲಿ ಹೇಳಿದ್ದನ್ನೇ ನಾನೂ ಹೇಳಿದ್ದು. ಆದರೆ ನನ್ನ ಮೇಲೆ ಮಾತ್ರ ಯಾಕೆ ಕೇಸ್ ರಿಜಿಸ್ಟರ್ ಮಾಡಲಾಗಿದೆ ಎಂದು ವೈಚಾರಿಕತೆ ಮೇಲೆ ಕಟ್ಟುಪಾಡು ವಿಧಿಸಲು ಪ್ರಯತ್ನಿಸುತ್ತಿರುವ ಶಕ್ತಿಗಳನ್ನು ಪ್ರಶ್ನಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ನಾಡೋಜ ಸಾರಾ ಅಬೂಬಕ್ಕರ್ ಮತ್ತು ಮಣಿಪಾಲ ಅಕಾಡೆಮಿಯ ಡಾ. ಶಾಂತಾರಾಂ ಸಹ ಮಾತನಾಡಿದರು. ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಮಾಧವಿ ಭಂಡಾರಿ ಸ್ವಾಗತ ಮಾಡಿದರು. ಕುಂದಾಪುರ ಸಮುದಾಯದ ಉಪಾಧ್ಯಕ್ಷ ಜಿ.ವಿ.ಕಾರಂತ ಉಪಸ್ಥಿತರಿದ್ದರು.

ಕಮ್ಮಟದಲ್ಲಿ ಓದು ಮತ್ತು ವಿಶ್ಲೇಷಣೆಗೆನಾಲ್ಕು ಪಠ್ಯಗಳನ್ನು ಆರಿಸಲಾಗಿತ್ತು. ಗೌರೀಶಕಾಯ್ಕಿಣಿಯವರ “ಭಾರತೀಯ ಸಂಸ್ಕøತಿಯುಆಧ್ಯಾತ್ಮಿಕವೇ?”, ಶಿವರಾಮ ಕಾರಂತರ “ನಮ್ಮ ಅಳತೆಯನ್ನು ಮೀರಲಾರದದೇವರು”, ಆರ್.ವಿ ಭಂಡಾರಿಅವರ “ಸಾಂಸ್ಕøತಿಕ ಸಂಘರ್ಷಗಳನ್ನು ಗ್ರಹಿಸುವ ವಿಧಾನಯಾವುದು?”, ಸಾರಾಅಬೂಬಕ್ಕರ್‍ಅವರ “ಭಾರತೀಯ ಸಮಾಜ, ಸಂಸ್ಕøತಿ, ಮಹಿಳೆ” ಆರಿಸಲಾದ ಮುಖ್ಯ ಪಠ್ಯಗಳು. ಪ್ರತಿಯೊಂದು ಪಠ್ಯ ಮತ್ತು ಲೇಖಕರ ಬಗ್ಗೆ ಒಬ್ಬ ಪರಿಣತರು ಒಂದು ಪ್ರವೇಶಿಕೆ ಒದಗಿಸಿದರು. ಆ ಮೇಲೆ ಕಮ್ಮಟದಲ್ಲಿ ಭಾಗವಹಿಸುವವರು ಗುಂಪುಗಳಲ್ಲಿ ಓದಿ ವಿಶ್ಲೇಷಿಸಿ ಚರ್ಚಿಸಿದರು. ಪುನಃ ಎಲ್ಲರೂ ಸೇರಿದಾಗ ಪ್ರತಿಯೊಂದು ಗುಂಪಿನ ಪರವಾಗಿ ಅವರ ಗ್ರಹಿಕೆಗಳನ್ನು ಹೇಳಿದರು. ಪ್ರಶ್ನೆಗಳನ್ನು ಕೇಳಿದರು. ಕೆಲವೊಮ್ಮೆ ಪಠ್ಯದಹಾಗೂ ಪರಿಣತರ ಅಭಿಪ್ರಾಯದ ಬಗ್ಗೆ ಭಿನ್ನಮತ ಸಹ ವ್ಯಕ್ತಪಡಿಸಿದರು. ಅದಕ್ಕೆ ಪರಿಣತರು ಉಪಸಂಹಾರ ಮಾಡುತ್ತಾ ತಮ್ಮ ಅಭಿಪ್ರಾಯ ತಿಳಿಸಿದರು. ಗೌರೀಶಕಾಯ್ಕಿಣಿಯವರ ಪಠ್ಯಕ್ಕೆ ಪ್ರೊ. ವರದೇಶ ಹಿರೇಗಂಗೆ, ಶಿವರಾಮ ಕಾರಂತರ ಓದಿಗೆ ಪ್ರೊ. ಕೇಶವ ಶರ್ಮಾ, ಆರ್. ವಿ. ಭಂಡಾರಿಯವರ ಪಠ್ಯಕ್ಕೆ ಡಾ. ಡೊಮಿನಿಕ್, ಸಾರಾ ಅವರ ಓದಿಗೆ ಡಾ. ನಿಕೇತನ ಪರಿಣತರಾಗಿದ್ದರು.
ಸುಮಾರು 2 ಗಂಟೆಗಳ ಅವಧಿ ತೆಗೆದುಕೊಂಡ ಈ ಪ್ರಕ್ರಿಯೆಏಕಮುಖವಾಗಿರಲಿಲ್ಲ ಅಂದರೆ ಪರಿಣತರು ಹೇಳುವುದು ಇತರರು ಕೇಳುವುದು ಮಾತ್ರ  ಆಗಿರಲಿಲ್ಲ. ಬರಿಯ ದ್ವಿಮುಖವೂ ಆಗಿರಲಿಲ್ಲ. ಕಮ್ಮಟದ ನಿರ್ದೇಶಕರು, ಉದ್ಘಾಟಕರೂ, ಅತಿಥಿಗಳೂ, ಇತರ ಪರಿಣತರು, ಸಂಘಟಕರೂ ಸೇರಿದಂತೆ ಬಹುಮುಖಿಯಾಯಿತು. ಒಂದು ಪಠ್ಯದ ಬಗ್ಗೆ ಪರಿಣತರು ಪ್ರವೇಶಿಕೆಯಲ್ಲಿ ಮತ್ತು ಉಪಸಂಹಾರ ಮಾಡುವಾಗ ವ್ಯಕ್ತಪಡಿಸಿದ ಅಭಿಪ್ರಾಯವನ್ನೇ ಪ್ರಶ್ನಿಸಲಾಯಿತು. ಇನ್ನೊಂದು ಪಠ್ಯದ ಗೋಷ್ಟಿಯಲ್ಲಿ ಪರಿಣತರು ಮೂಲ ಪಠ್ಯವನ್ನು ಪಕ್ಕಕ್ಕಿಟ್ಟು ತಮ್ಮದೇ ಪಠ್ಯವನ್ನು ಮಂಡಿಸುತ್ತಿದ್ದಾರೆಂಬ ಟೀಕೆ ಬಂತು. ಪ್ರತಿಯೊಂದು ಪಠ್ಯ ಹಲವು ಕೋನಗಳಿಂದ ತೀವ್ರ ವಿಶ್ಲೇಷಣೆಗೆ ಒಳಗಾಯಿತು. ಪಠ್ಯ ಬರೆದವರ ಓದುತ್ತಿರುವವರ ಒಟ್ಟಾರೆ ದೃಷ್ಟಿಕೋಣ/ಲೋಕದೃಷ್ಟಿ ನಿರ್ದಿಷ್ಟ ಪಠ್ಯಕ್ಕೆ ಎಷ್ಟು ಪ್ರಸ್ತುತ, ಹಲವು ‘ಓದು’ಗಳ ನಡುವಿನ ತಾಕಲಾಟ ಬಗೆಹರಿಸುವುದು ಹೇಗೆ ಮುಂತಾದ ಹಲವು ವಿಷಯಗಳ ಬಗ್ಗೆ ಕಮ್ಮಟ ‘ಲೈವ್‍ಡೆಮೊ’ ಆಯಿತು. ಸಮಕಾಲೀನ ವಿವಾದಗಳಾದ ಹಿಂದೂ ಸಮಾಜೋತ್ಸವ, ಘರ್ ವಾಪಸಿ, ಲವ್-ಜಿಹಾದ್ ಗಳಿಗೂ ಈ ಪಠ್ಯಗಳಿಗೂ ಇರುವ ಸಂಬಂಧ ಸಹ ಚರ್ಚೆಗೆ ಬಂತು.

ಕಾರಂತೆರ “ನಮ್ಮ ಅಳತೆಯನ್ನು ಮೀರಲಾರದದೇವರು” ಓದಿನ ಚರ್ಚೆಯಲ್ಲಿ ಭಾಗವಹಿಸಿದ ಅಧ್ಯಾಪಕಿ ತಾನು ಪಿಯುಸಿಯಲ್ಲಿ ಇದನ್ನು ಮೊದಲ ಬಾರಿಗೆ ಓದಿದಾಗ ತನ್ನ ವಿಚಾರದ ದಿಕ್ಕನ್ನೇ ಬದಲಾಯಿಸಿತ್ತು ಎಂದು ನೆನಪಿಸಿಕೊಂಡರು. ಸಮಾರೋಪದಲ್ಲಿ ಕಮ್ಮಟದಲ್ಲಿ ಭಾಗವಹಿಸಿದªರ ಪ್ರತಿನಿಧಿಗಳಿಂದÀ ಇಂತಹ ನಿರ್ದಿಷ್ಟ ಪ್ರತಿಕ್ರಿಯೆ ಬರದಿದ್ದರೂ ಇಂತಹ ಪರಿಣಾಮದ ಸಾಧ್ಯತೆಯಂತೂ ಕಂಡು ಬಂತು. ಅಲ್ಲದೆ ಹಲವು ಬಿ.ಎಡ್. ಮತ್ತು ಕಾಲೇಜು ಶಿಕ್ಷಕರಿಂದ ಅವರ ಸಂಸ್ಥೆಗಳಲ್ಲಿ ಇಂತಹ ಕಮ್ಮಟ ನಡೆಸಲು ಸ್ಫೂರ್ತಿ ಸಹ ಕಂಡು ಬಂತು. ಸಮಾರೋಪದಲ್ಲಿ ಡಾ. ಭಾಸ್ಕರ ಮಯ್ಯ, ಸಾಹಿತ್ಯ ಸಮುದಾಯದ ವಸಂತರಾಜ, ಕುಂದಾಪುರ ಸಮುದಾಯದ ಉದಯ ಗಾಂವಕಾರ ಮತ್ತು ಸದಾನಂದ ಬೈಂದೂರು ಮಾತನಾಡಿದರು.