ರಂಗ ರಂಗು ರಜಾ ಮೇಳಕ್ಕೆ ರಂಗಿನ ಚಾಲನೆ

ರಂಗರಂಗು ರಜಾಮೇಳವನ್ನು ಉದ್ಯಮಿ ಕಾರ್ತಿಕೇಯ ಮಧ್ಯಸ್ಥ ಇಂದು ಉದ್ಘಾಟಿಸಿದರು. ರಂಗಕರ್ಮಿ ವಾಸುದೇವ ಗಂಗೇರಾ ಮಕ್ಕಳಿಗಾಗಿ ಈ ಮೇಳದಲ್ಲಿ ನಕ್ಕಳಾ ರಾಜಕುಮಾರಿ ನಾಟಕವನ್ನು ಮಕ್ಕಳಿಗಾಗಿ ನಿರ್ದೇಶಿಸುವರು.
ನಾಟಕವಲ್ಲದೆ, ಮಾನವ ಸಮಾಜ ಕಂಡುಕೊಂಡ ಮೊದಲ ವೃತ್ತಿಗಳಲ್ಲೊಂದಾದ ಕುಂಬಾರಿಕೆಯೂ ಸೇರಿದಂತೆ ನೆಲಮೂಲದ ಜೀವನಕಲೆಗಳನ್ನು ಮಕ್ಕಳಿಗೆ ಪರಿಚಯಿಸುವ ಉದ್ಧೇಶವಿದೆ.ಮಕ್ಕಳನ್ನು ಅವರ ತಂದೆ-ತಾಯಿಯರ ಬಾಲ್ಯಕ್ಕೆ ಕರೆದುಕೊಂಡು ಹೋಗುವ ಪ್ರಯತ್ನಗಳು ಈ ಬಾರಿಯೂ ಇರುತ್ತವೆ.... ಮಾವಿನ ಕಾಯಿ-ಉಪ್ಪು-ಮೆಣಸು ಸೇರಿ ಪಿಚಡಿ ಮಾಡಿರಲಿಲ್ಲವೇ ನೀವು? ತೆಂಗಿನ ಗರಿಯ ಗಿರಿಗಿಟ್ಲಿ, ವಾಚು ಮರೆಯಬಹುದಾ? ಉದ್ದುದ್ದ ದಾಸಕಬ್ಬು ತಿಂದು ತೇಗಿದ್ದು...ಗೆಣಸನ್ನು ಒಲೆಯ ಬೂದಿಯಲ್ಲಿ ಹುಗಿದಿಟ್ಟು ಬೇಯುವ ಮೊದಲೇ ತೆಗೆದು ಮುಗಿಸಿದ್ದು...ಇಳಿತದಲ್ಲಿ ಹೊಳೆಯ ಹೊಯ್ಯಿಗೆಯಲ್ಲಿ ಕೈಯಾಡಿಸಿ ಮಳಿ ಹೆಕ್ಕಿದ್ದು... ಹೀಗೆ
ಮೇಳದಲ್ಲಿ ಮಕ್ಕಳು ಸಿನೇಮಾ ನೋಡಲಿದ್ದಾರೆ. ತಮ್ಮದೇ ಮಕ್ಕಳಾಟವನ್ನು ತೆರೆಯ ಮೇಲೆ ಕಂಡು ಖುಷಿಯಾಗಲಿದ್ದಾರೆ. ಈ ಬೇಸಿಗೆಯಲ್ಲೂ ನೀರಾಟ ಆಡಲಿದ್ದಾರೆ. ಮೇಳದಲ್ಲಿ ಸೇವಿಸುವ ಉಪಹಾರ, ಊಟ, ಪಾನೀಯ ಯಾವುದಾಗಬೇಕೆಂಬ ನಿರ್ಧಾರವನ್ನು ಅವರೇ ತೆಗೆದುಕೊಳ್ಳಿದ್ದಾರೆ.
ಮದ್ಯಾಹ್ನ ಊಟದ ನಂತರ ಅರ್ಧ ಘಂಟೆ ಗಾಂಧಿ ಪಾರ್ಕಿನಲ್ಲಿ ಆಟ, ಮೇಳದ ಎಂಟುದಿನಗಳಲ್ಲಿ ಕನಿಷ್ಠ ಎರಡು ಬಾರಿ ಸುತ್ತಾಟ... ಕ್ರಾಫ್ಟು, ಪೇಂಟಿಂಗು, ಮಾಸ್ಕು ಎಲ್ಲ ಮಾಮೂಲಿನಂತೆ ಇದ್ದದ್ದೇ...
ಇಷ್ಟೆಲ್ಲ ಯೋಜಿಸಿದ್ದೇವೆ..