ಗೋಡೆಗೆ ಕತೆ ಹೇಳಿ


ಬದುಕನ್ನು ಬೆಳಗಿಸಬೇಕಾದ ಧರ್ಮ, ಅರ್ಥ, ಸಂಸ್ಕೃತಿ, ಭಾಷೆ, ಆಚರಣೆಗಳು ನಮ್ಮನ್ನು ಪ್ರತ್ಯೇಕಿಸುವ ಗೋಡೆಗಳಾಗಿ ಮಾರ್ಪಾಡಾಗಿರುವದು ನಮ್ಮ ಕಣ್ಣೆದುರಿಗಿರುವ ಸತ್ಯ. ಬೆರೆತುಬಾಳಬೇಕಾಗಿದ್ದ ಮನುಷ್ಯರು ಇಂದು ಭಾವಗಳಿಗೂ ಬೇಲಿ ಹಾಕಿಕೊಂಡಿದ್ದು, ಪರಸ್ಪರ ಸಂವಹನವನ್ನೇ ಮರೆತಿದ್ದಾರೆ. ಜಗದ ತುಂಬ ಗೋಡೆಗಳೆದ್ದಿವೆ ; ಮನಸ್ಸುಗಳ ನಡುವೆ ಬೇಲಿಗಳೆದ್ದಿವೆ. ಇಂದು ಬೇಲಿಯಾಚೆ ನಿಂತಾದರೂ ಇನ್ನೊಬ್ಬರ ಕತೆ ಕೇಳಿಸಿಕೊಳ್ಳಬೇಕಿದೆ. ಸಮುದಾಯದ ನೋವನ್ನು ಕತೆಯಾಗಿಸುವ ಮತ್ತು ಎಂತಹ ಸ್ಥಿತಿಯಲ್ಲೂ ಸೃಷ್ಠಿಸುವ ಗುಣವನ್ನು ಬಿಟ್ಟುಕೊಡದ ರಂಗಭೂಮಿಯ ಜಿಗುಟುತನವನ್ನು ಬಳಸಿಕೊಂಡೇ, ಜಗತ್ತನ್ನು ಹಿಂಸ್ರಕವಾಗಿಸಿದ ಅನಿಷ್ಠಗಳಿಂದ ಬಿಡಿಸಿಕೊಳ್ಳಬೇಕಿದೆ. ‘ಬಿಡುಗಡೆಯ ರಂಗಭೂಮಿ” ಜಗತ್ತಿನೆಲ್ಲೆಡೆ ಸಕ್ರಿಯ ಗೊಳ್ಳಬೇಕಿದೆ. 
ಅದಕ್ಕಾಗಿ ನಾವು ಕತೆಹೇಳುತ್ತೇವೆ.

ರಚನೆ : ಸುಧಾ ಆಡುಕಳ. ನಿರ್ದೇಶನ : ಡಾ.ಶ್ರೀಪಾದ ಭಟ್ . ಸಹನಿರ್ದೇಶನ :ಯತೀಶ್ ಕೊಳ್ಳೇಗಾಲ ಮತ್ತು ಲಕ್ಷ್ಮಣ ಪಿ.

ಜನವರಿ 4 ಅಪರಾಹ್ನ 3.00 ರಿಂದ, ಕಲಾಮಂದಿರ, ಕುಂದಾಪುರ
ಸಹಕಾರ
ಬಕುಳ ಸಾಹುತ್ಯ ವೇದಿಕೆ, ಸ.ಪ.ಪೂ ಕುಂದಾಪುರ