ಬಿಡುಗಡೆಯ ರಂಗಸಂಚಾರ-ಸಮುದಾಯ ರೆಪರ್ಟರಿ


ಈ ವರ್ಷದ ಜಾಗತಿಕ ರಂಗ ದಿನಾಚರಣೆಯ ಸಂದೇಶ ನೀಡಿದ ದಾರಿಯೋ ಪೋ ನುಡಿದ ಮಾತು-
“ನಮ್ಮ ಕತೆಯನ್ನು ನಾವು ಹೇಳಬೇಕು. ಯುವಕರನ್ನು ಬಳಸಿಕೊಂಡುಯುವಕರಿಗೆ ಹೇಳುತ್ತ ಹೋಗಬೇಕು. ಅವರಿಗೆ ನಾಟಕದ ಕಲೆ ಕಲಿಸುವದು ಅಂದರೆ ಅಂಗಾಂಗಗಳನ್ನು ಹೇಗೆ ಬಳಸೋದು, ಎಲ್ಲಿ ಉಸಿರು ಬಿಗಿ ಹಿಡಿಯೋದು, ಎಲ್ಲಿ ದನಿಯನ್ನು ಏರಿಳಿಸಬೇಕು ಎನ್ನುವದನ್ನು ಕಲಿಸುವದಷ್ಟೇ ಅಲ್ಲ. ನಮ್ಮ ಸುತ್ತ ಮುತ್ತ ಏನಾಗುತ್ತಿದೆ ಅನ್ನುವದನ್ನು ಹೇಳಿಕೊಡಬೇಕು. ಹಾಗೆ ಮಾಡಿದಾಗ ಅವರು ತಮ್ಮ ಕತೆಯನ್ನು ಹೇಳಬಲ್ಲ ಸಮರ್ಥರಾಗುತ್ತಾರೆ. ತನ್ನ ಕಾಲದ ಕುರಿತು ಹೇಳದ ಕತೆಯಾಗಲೀ, ನಾಟಕವಾಗಲೀ, ಕಲೆಯಾಗಲೀ ಸಮಕಾಲೀನ ಅಲ್ಲ.” 
ರಂಗಭೂಮಿ ದಿನದ ಸಂದೇಶ

ಸಮುದಾಯ ರೆಪರ್ಟರಿ- ಬಿಡುಗಡೆಯ ರಂಗಸಂಚಾರ

'ಸಮುದಾಯ' ಸದಾ ಸಮಕಾಲೀನ ಕಲೆಯಲ್ಲಿಯೇ ಬದುಕು ಕಂಡಿದೆ. ನಾವೀಗ ನಮ್ಮ ಕತೆ ಹೇಳಬೇಕಿದೆ. ಅದಕ್ಕೆ ನಮ್ಮ ಯುವಕರನ್ನು ಸಿದ್ಧಗೊಳಿಸಬೇಕಿದೆ. ನಾಡಿನ ತುಂಬ ಈ ಕಥನವನ್ನು ತಲುಪಿಸುವ ಜವಾಬ್ದಾರಿ ನಿರ್ವಹಿಸುವ ಸಲುವಾಗಿ 'ಸಮುದಾಯ' ರೆಪರ್ಟರಿ ಕಟ್ಟುತ್ತಿದೆ. ರಂಗಭೂಮಿಯನ್ನು ತನ್ನ ಸಾಂಸ್ಕøತಿಕ ಅಭಿವ್ಯಕ್ತಿಯ ಪ್ರಮುಖ ಮಾಧ್ಯಮವನ್ನಾಗಿಸಲು ಹೊರಟಿದೆ..
ರಂಗಭೂಮಿಗೆ ಇದುವರೆಗಿನ ಶೋಕಿತನಕ್ಕಿಂತ ಬೇರೆಯದೇ ಆದ ಹೊಣೆಗಾರಿಕೆಯೂ ಇದೆ. ಈ ಹೊಣೆಗಾರಿಕೆಯನ್ನು ರಂಗ ಮುಖೇನ ನಿರ್ವಹಿಸಬೇಕಾದ ಜವಾಬ್ದಾರಿಯೂ ಸಮುದಾಯದ ಮೇಲಿದೆ. ಮುಖ್ಯವಾಗಿ ರಂಗಭೂಮಿ ರೈತರನ್ನೂ, ಶಾಲೆಯನ್ನೂ, ಕಾಲೇಜುಗಳನ್ನೂ, ಕಾರ್ಮಿಕರನ್ನೂ - ಹೀಗೆ ಸಾಮುದಾಯಿಕ ಬದುಕಿನ ಚಾಲನಾ ಶಕ್ತಿಯ ಎಲ್ಲ ಘಟಕಗಳನ್ನೂ ತಲುಪಲೇಬೇಕಿದೆ. ಈ ಕುರಿತು ಸಮುದಾಯ ಯೋಜನೆಯನ್ನು ಹಮ್ಮಿಕೊಳ್ಳಬೇಕಿದೆ. ಅದರ ಪ್ರಮುಖ ಅಂಗವಾಗಿ ‘ರೆಪರ್ಟರಿ’ಯನ್ನು ಆರಂಭಿಸುತ್ತಿದೆ.


ರೆಪರ್ಟರಿಯಲ್ಲಿ...

ಕನ್ನಡ ಸಾಹಿತ್ಯ ಲೋಕದ ಪ್ರಗತಿಶೀಲ ಜನಪರ ಕಾದಂಬರಿಕಾರ ನಿರಂಜನರ ‘ಮೃತ್ಯುಂಜಯ’ ಮತ್ತು ‘ಚಿರಸ್ಮರಣೆ’ ಕಾದಂಬರಿಗಳನ್ನು ಒಂದುಗೂಡಿಸಿ ರಚಿಸಲಾದ ‘ಮೃತ್ಯುಂಜಯ’ ರಂಗರೂಪವು ರೆಪರ್ಟರಿಯ ಬಹುಮುಖ್ಯ ಆಕರ್ಷಣೆ. ಡಾ.ಎಂ.ಜಿ.ಹೆಗಡೆಯವರು ಸಿದ್ಧಪಡಿಸಿರುವ ಈ ರಂಗರೂಪವನ್ನು ರಂಗಭೂಮಿಯಲ್ಲಿ ಈಗಾಗಲೇ ರಂಗ ನಿರ್ದೇಶಕನಾಗಿ ತನ್ನ ಛಾಪು ಮೂಡಿಸಿರುವ ಡಾ.ಶ್ರೀಪಾದ ಭಟ್ ನಿರ್ದೇಶಿಸಿದ್ದಾರೆ. ರಂಗ ವಿನ್ಯಾಸವನ್ನು ರಂಗಭೂಮಿಯ ಹಿರಿಯ ಚೇತನ ಎಂ.ಎಸ್.ಸತ್ಯು ಅವರು ಸಿದ್ಧಪಡಿಸಿದ್ದಾರೆ. 
ಇದರ ಜತೆಯಲ್ಲೇ ಪ್ಯಾಲೆಸ್ತೈನ್ ಕುರಿತ ಒಂದು ಬೀದಿ ನಾಟಕವೂ ಕಾರ್ಯಾಗಾರದಲ್ಲಿ ಸಿದ್ಧವಾಗಿದೆ. ಪಂಪನಿಂದ ಹಿಡಿದು ಇತ್ತೀಚಿನವರೆಗಿನ ಕನ್ನಡ ಸಾಹಿತ್ಯ ಇತಿಹಾಸವನ್ನು ಹೇಳುವ ‘ಕಾವ್ಯರಂಗ’ ಎಂಬ ನವೀನ ಕಲಾ ಪ್ರಕಾರ ಕೂಡ ರೆಪರ್ಟರಿಯ ಭಾಗವಾಗಿದೆ.

3 ಜನವರಿ 2016, ರವಿವಾರ, ಸಂಜೆ 6.30 ಕ್ಕೆ  ಕಲಾಮಂದಿರ, ಸ.ಪ.ಪೂ ಕಾಲೇಜು, ಕುಂದಾಪುರ ಇಲ್ಲಿ
ನಿರ್ದೇಶನ-ಡಾ. ಶ್ರೀಪಾದ ಭಟ್
4 ಜನವರಿ 2016, ಸೋಮವಾರ,಻ಪರಾಹ್ನ 2.00ರಿಂದ  ಕಲಾಮಂದಿರ, ಸ.ಪ.ಪೂ ಕಾಲೇಜು, ಕುಂದಾಪುರ ಇಲ್ಲಿ ಬಕುಳ ಸಾಹಿತ್ಯ ವೇದಿಕೆಯ
ಸಹಕಾರದಲ್ಲಿ 
ಕಾವ್ಯರಂಗ