ಮಕ್ಕಳ ಕ್ರಿಯಾಶಕ್ತಿಯನ್ನು ಉದ್ಧೀಪಿಸುವ ರಂಗರಂಗು ರಜಾಮೇಳ
ಸಮುದಾಯವು ಕಳೆದೈದು ವರ್ಷಗಳಿಂದಲೂ ಮಕ್ಕಳಿಗಾಗಿ ಉಚಿತ ರಜಾಮೇಳವನ್ನು ನಿಯಮಿತವಾಗಿ ನಡೆಸುತ್ತಾ ಬಂದಿದೆ. ಮಕ್ಕಳ ರಜಾಮೇಳಗಳು ವ್ಯಾಪಾರವಾಗಬಾರದು ಎಂಬ ಕಾಳಜಿಯಿಂದ ರಂಗರಂಗು ರಜಾಮೇಳದಲ್ಲಿ ಭಾಗವಹಿಸುವ ಮಕ್ಕಳಿಂದ ಪ್ರವೇಶಶುಲ್ಕವಿರುವುದಿಲ್ಲ. ಮೇಳದಲ್ಲಿ ಸರಕಾರಿ ಶಾಲೆಯ ವಿದ್ಯಾರ್ಥಿಗಳು ಮತ್ತು ವಲಸೆ ಕಾರ್ಮಿಕ ವಿದ್ಯಾರ್ಥಿಗಳಿಗೆ ಪ್ರಾಶಸ್ತ್ಯದ ಮೇಲೆ ಪ್ರವೇಶ ನೀಡಲಾಗುತ್ತದೆ.

ವರ್ಷದ ಮೇಳವು ಎಪ್ರಿಲ್ 23 ರಿಂದ ಮೇ 2 ರವರೆಗೆ ನಡೆಯುತ್ತದೆ. ರಜಾಮೇಳದಲ್ಲಿ ನೆಲಮೂಲದ ಸಂಸ್ಕøತಿಯನ್ನು ಮಕ್ಕಳಿಗೆ ಪರಿಚಯಿಸುವ ಉದ್ದೇಶವಿದೆ. ಮಕ್ಕಳ ಅಸಾಧಾರಣ ಕ್ರಿಯಾಶಕ್ತಿಯನ್ನು ಉದ್ಧೀಪಿಸುವ, ಅವರ ವ್ಯಕ್ತಿತ್ವವನ್ನು ನೆಲದೊಡನೆ ಬೆಸೆಯುವ, ಜಾತಿ-ಮತ-ಭಾಷೆಗಳ ಹೆಸರಿನಲ್ಲಿ ನಾವು ನಿರ್ಮಿಸಿಕೊಂಡಿರುವ ಗೋಡೆಗಳನ್ನು ಮೀರಿ ಮನುಷ್ಯತ್ವದ ವಿಶಾಲ ಕುಟುಂಬದೊಳಗೆ ಬದುಕುವದನ್ನು ಕಲಿಯಲು ಮೇಳದಲ್ಲಿ ಒತ್ತು ನೀಡಲಾಗುವುದು. ಮೇಳದ ಭಾಗವಾಗಿ ಮಕ್ಕಳು ಹೊರಸಂಚಾರ, ಮಕ್ಕಳ ಸಂತೆ, ಕಛೇರಿ ಭೇಟಿಗಳನ್ನು ಮಾಡುವರು.


ಪ್ರತಿ ವರ್ಷದಂತೆ ಮೇಳದ ಮಕ್ಕಳು ವರ್ಷವೂ ಮೇಳದ ಸಮಾರೋಪ ಸಮಾರಂಭದಲ್ಲಿ ನಾಟಕ ಪ್ರದರ್ಶನವನ್ನು ನೀಡಲಿರುವರು. ನಮ್ಮನ್ನಗಲಿದ ಕಲಾವಿದ, ಹಿತೈಷಿ ಭೋಜುಹಾಂಡ ಅವರ ನೆನಪುಗಳಿಗೆ ಮೇಳವು ಋಣಿಯಾಗಿರುವುದು.

ಸಮುದಾಯದ ಕುರಿತು
ಸಮೂಹದ ಆಶಯಗಳನ್ನು ಆಕೃತಿಗೊಳಿಸುತ್ತ, ಕಾಲದ ಕರೆಗೆ ಓಗೊಡುತ್ತ ಸಾಗಿಬಂದಸಮುದಾಯಕ್ಕೆ 40 ವರ್ಷಗಳು ತುಂಬಿವೆಸಮುದಾಯವು ಈಗ ಸೌಂದರ್ಯಶಾಸ್ತ್ರದ ಹಲವು ಭೂಮಿಕೆಗಳಲ್ಲಿ ಸಮಾಜದ ಗತಿಬಿಂಬವಾಗಿ ಮುಂದುವರಿಯುತ್ತಿದೆ.
   `ಕಲೆ ಕಲೆಗಾಗಿ ಅಲ್ಲ, ಜನತೆಗಾಗಿಎಂಬ ಧ್ಯೇಯ ದೊಂದಿಗೆ  ಕಳೆದ ನಾಲ್ಕು ದಶಕಗಳಿಂದಲೂ ಜನತೆಯ ನೋವು-ನಲಿವುಗಳಿಗೆ ಸಾಂಸ್ಕøತಿಕವಾಗಿ ಸ್ಪಂದಿಸುತ್ತಾ ಬಂದಿದೆ. ಬೀದಿ ನಾಟಕಗಳು, ರಂಗ ನಾಟಕಗಳು, ಜಾಥಾ ಗಳ ಮೂಲಕ ರಾಜ್ಯದ ಸಾಂಸ್ಕøತಿಕ ಭೂಪಟದಲ್ಲಿ ಗುರುತಿಸಿಕೊಂಡಿದೆ. ಅನೇಕ ವಿಚಾರ ಸಂಕಿರಣಗಳು, ಚರ್ಚೆಗಳ ಮೂಲಕ ಸಾಂಸ್ಕøತಿಕ ವಾಗ್ವಾದಗಳನ್ನು ಹುಟ್ಟುಹಾಕಿದೆಮೌಢ್ಯ ಮತ್ತು ಶೋಷಣೆಗಳನ್ನು ಗಟ್ಟಿ ಧ್ವನಿಯಲ್ಲಿ ಖಂಡಿಸಿದೆ. ಹೊಸ ಮೌಲ್ಯಗಳತ್ತ ಸಮುದಾಯ ಜಾಥಾ, ಜಾತಿ ಅಸಮಾನತೆಯ ವಿರುದ್ಧ ಕಾಲೇಜುಗಳಿಗೆ ಜಾಥಾ, ರೈತನತ್ತ ಸಮುದಾಯ ಜಾಥಾ, ಅಣುಸಮರ ವಿರೋಧಿ ಬಣ್ಣದ ಜಾಥಾ, ಬೀಕರ ಬರದ ಎದುರು ಸಮುದಾಯ ಜಾಥಾ, ಹೀಗೆ ಹತ್ತು ಹಲವು ಜಾಥಾಗಳನ್ನು ಹಮ್ಮಿಕೊಂಡು ಜನತೆ ಕಷ್ಟಗಳಿಗೆ ಸಾಂಸ್ಕøತಿಕವಾಗಿ ಪ್ರತಿಕ್ರಿಯಿಸಿದೆ. ನೆಮ್ಮದಿಯ ನಾಳೆಗಳಿಗಾಗಿ ಹಂಬಲಿಸಿದೆ. ಕಬೀರ, ಹಿಂಸಾಹಿ ಪರಮೋಧರ್ಮ, ಮೆರವಣಿಗೆ, ಕುಲಂ, ಸುಲ್ತಾನ್ ಟಿಪ್ಪು ಇವು ಕುಂದಾಪುರ ಸಮುದಾಯ ಪ್ರದರ್ಶಿಸಿದ ಮಹತ್ವದ ನಾಟಕಗಳು. ವೈಚಾರಿಕ ಮತ್ತು ಸಾಂಸ್ಕøತಿಕ ಚಳುವಳಿಯ ಮೂಲಕ ಮೌಢ್ಯ-ಶೋಷಣೆಗಳಿಂದ ಮುಕ್ತವಾದ ಪ್ರಗತಿಪರ ಸಮಾಜವನ್ನು ನಿರ್ಮಿಸುವ ಪ್ರಯತ್ನದ ಒಂದು ಭಾಗವಾಗಿ ಸಮುದಾಯವು ಕಳೆದ ಐದು ವರ್ಷಗಳಿಂದಲೂ ರಂಗ ರಂಗು ಮಕ್ಕಳ ಉಚಿತ ರಜಾಮೇಳವನ್ನು ಆಯೋಜಿಸುತ್ತಿದೆ.

ಸಮುದಾಯ ಕುಂದಾಪುರದ ಬ್ಯಾಂಕ್ ಖಾತೆ
Canara Bank,Kundapura A/c No: 0603101052694  IFSC: CNRB0000603

ಸಂಪರ್ಕ
ಸಮುದಾಯ, ಕುಂದೇಶ್ವರ ದೇವಸ್ಥಾನದ ಎದುರು, ಮುಖ್ಯರಸ್ತೆ
ಕುಂದಾಪುರ-576201
ಮಿಂಚಂಚೆ:  udayagaonkar@gmail.com
Visit us @ samudaya.kundapura.org