ರಂಗ ಸಾಧ್ಯತೆಗಳನ್ನು ವಿಸ್ತರಿಸಿದ ಪ್ರಯೋಗ

ಬರೆಹ: ರಮೇಶ ಗುಲ್ವಾಡಿ

*ಬೊಲಿವಿಯನ್ ಸ್ಟಾರ್ಸ್* ನಾಟಕ ನೋಡಿದ ಬಳಿಕ ನಾಟಕದ ಸಾಧ್ಯತೆಗಳ ಕುರಿತು ಅಚ್ಚರಿಯ ಭಾವವೊಂದು ಸುಳಿದಾಡಿದೆ. ಚಕ್ ದೇ ಇಂಡಿಯಾ ವಾಗಲಿ ಲಗಾನ್ , ದಂಗಲ್ ಆಗಲಿ ಅದಕ್ಕೆ ದೊರಕಿದ ಬೆಳ್ಳಿ ತೆರೆಯ ಕಾರಣದಿಂದ ಅನನ್ಯತೆಯನ್ನು ಪಡೆಯಿತು. ಆದರೆ ಫುಟ್ಬಾಲ್ ನಂತಹ ಆಟವನ್ನು ನಾಟಕ ರಂಗದ ಮೇಲೆ ಸಾಕಾರಗೊಳಿಸುವ ಸವಾಲು ತುಂಬಾ ದೊಡ್ಡದು. ಭಾಷೆಯನ್ನು ಮೀರಿ ನಡೆದ ಸಂವಹನವಿದು. ನಾಟಕದ ವಿಮರ್ಶೆ ನನ್ನ ಉದ್ದೇಶವಲ್ಲ. ಕೊಲ್ಲಬಹುದು, ಸೋಲಿಸಲು ಸಾಧ್ಯವಿಲ್ಲ ಎಂಬ ಸಂದೇಶವೇ ಎಲ್ಲವನ್ನೂ ಹೇಳಿ ಬಿಡುತ್ತದೆ.

ನಾಟಕದ ಆರಂಭದಲ್ಲಿ ಕನ್ನಡದಲ್ಲಿ ನಾಟಕವನ್ನು ಪರಿಚಯಿಸುವ ಅನಗತ್ಯ ಕಾರ್ಯಕ್ರಮ ಮಾತ್ರ ದೃಷ್ಟಿ ಬೊಟ್ಟಾಗಿತ್ತು.

ಇನ್ನೂ ಓದಿ: ಕ್ಲಿಕ್ಮಾಡಿ